ಹೊಸ PAN Card Rules 2026 : ಪ್ಯಾನ್ ಕಾರ್ಡ್ ಹೊಸ ನಿಮಯಮಗಳು. ಅಪ್ಡೇಟ್, ಅರ್ಜಿ ವಿಧಾನ ಸುಂಪೂರ್ಣ ಮಾಹಿತಿ

By Bharath k

April 1, 2026 3:41 PM

pan card apply online changes 2026

2026ರಲ್ಲಿ PAN Card ಬಂದಿರುವ ಹೊಸ ನಿಯಮಗಳು ಏನು? ಹೊಸ ಅಪ್ಡೇಟ್,ಆಧಾರ್ ಲಿಂಕ್, ಅರ್ಜಿ ವಿಧಾನ, ದಂಡಗಳು, ಎಲ್ಲಾ ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಿ.

ಪರಿಚಯ (indroduction)

Live Kannada News ; 2026 ರಲ್ಲಿ ಪ್ಯಾನ್ ಕಾರ್ಡ್ ಮಹತ್ವ ಏಕೆ ಹೆಚ್ಚಾಗಿದೆ? ಹೊಸ ಆದಾಯ ತೆರಿಗೆ ಕಾಯ್ದೆ 2025 (Income Tax Act 2025) 1 ಏಪ್ರಿಲ್ 2026  ರಿಂದ ಜಾರಿಗೆ ಬರಲಿದ್ದು PAN Card ಬಳಕೆಯ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ ದೈನಂದಿನ ಬ್ಯಾಂಕಿಂಗ್, ಆಸ್ತಿ ಖರೀದಿ ಮತ್ತು ಹಣಕಾಸಿನ ವಹಿವಾಟುಗಳಲ್ಲಿ ಪಾರದರ್ಶಕತೆ ತರಲು ಸರ್ಕಾರ PAN rules update ಮಾಡಿದೆ.

ಸರ್ಕಾರ ದಿಂದ ಬಂದಿರುವ ಹೊಸ ನಿಮಯಗಳ ಹಿನ್ನಲೆ : ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟುಗಳುನ್ನು (Hig-value transactions) ಸುಲಭವಾಗಿ ಟ್ರ್ಯಾಕ್ ಮಾಡಲು ಹಾಗು ತೆರೆಗೆ ವಂಚನೆ ತಡೆಯಲು Income Tax India ಈ ಹೊಸ ನಿಯಮಗಳನ್ನು ತಂದಿದೆ. ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರು ಈ  PAN Card importance  ಮತ್ತು ಹೊಸ ಮಾಹಿತಿಯನ್ನು ತಿಳಿದುಕೊಳ್ಲಲು ಅಗತ್ಯ ವಾಗಿದೆ.

2026 ರ ಹೊಸ PAN Card ನಿಯಮಗಳು ಏನು?

1 ಏಪ್ರಿಲ್ 2026 ರಿಂದ ಪ್ಯಾನ್ ಕಾರ್ಡ್ ಗೆ ಸಂಬಂಸಿದಂತೆ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿದೆ 

ಪ್ರಮುಖ ಬದಲಾವಣೆಗಳ ಸಂಕ್ಷಿಪ್ತ ವಿವರಣೆ: 

  • ಆಧಾರ್ ಮಾತ್ರ ಸಾಲದು: ಇಲ್ಲಿಯವರಗೆ ಕೇವಲ ಆಧಾರ್ ಕಾರ್ಡ ಬಳಸಿ PAN ಪಡೆಯಬಹುದಿತ್ತು. ಆದರೆ 1 ಏಪ್ರಿಲ್ 2026 ರಿಂದ ಆಧಾರ್ ಜೊತೆಗೆ ಜನ್ಮ ದಿನಾಂಕ ಮತ್ತು ಗುರುತಿನ ಧ್ರಡೀಕರಣಕಾಗಿ ಇತರ ದಾಖಲೆಗಳನ್ನು ನೀಡುವುದು ಕಡ್ಡಾಯ.
  • ಹೊಸ ಅರ್ಜಿ ನಮೂನೆಗಳು (New Forms): ಹಳೆಯ Form 49A ಮತ್ತು 49AA  ರದ್ದಾಗಲಿವೆ
    • ಭಾರತೀಯ ನಾಗರಿಕರಿಗೆ: Form 93
    • ಭಾರತೀಯ ಕಂಪನಿಗಳಿಗೆ :  Form 94
    • ವಿದೇಶಿ ವ್ಯತಿಗಳು ಹಾಗು ಕಂಪನಿಗಳಿಗೆ  Form 95 ಮತ್ತು  Form 96
  • ಹೆಸರು ಹೊಂದಾಣಿಕೆ : PAN ಕಾರ್ಡ್ ನಲ್ಲಿರುವ ನಿಮ್ಮ ಹೆಸರು ಕಡ್ಡಾಯವಾಗಿ ಆಧಾರ್ ಕಾರ್ಡ್ನಲ್ಲಿರುವಂತೆಯೇ ಇರಬೇಕು (PAN Changes India)
  • PAN 2.o ಮತ್ತು QR Code:  ಹೊಸದಾಗಿ ವಿತರಿಸುವ ಎಲ್ಲಾ ಪ್ಯಾನ್ ಕಾರ್ಡ್ ಗಳು QR ಕೊಡ ಅನ್ನು ಹೊಂದಿರಲಿದ್ದು ಸ್ಕ್ಯಾನ್ ಮಾಡಿದ ತಕ್ಷಣ್ ನೈಜ ಸಮಯದ ಧ್ರಡೀಕರಣ (Real-Time vertification) ಲಭ್ಯವಾಗುತದ್ದೆ 

ಹೊಸ ಅರ್ಜಿ ವಿಧಾನ (PAN Card Apply Process 2026)

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (PAN card apply online):  ಸರ್ಕಾರವು PAN ಸೇವೆಗಳಿಗಿ ಏಕೀಕೃತ ಪೋರ್ಟಲ್ (Unified portal) ಅನ್ನು ತರುತಿದೆ . ಇದರಿಂದ Protean ಮತ್ತು UTIITSL  ಬದಲಾಗಿ ಒಂದೇ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು (Documents for PAN) : 1 ಏಪ್ರಿಲ್ 2026ರ ನಂತರ ಆಧಾರ್ ಜೊತೆಗೆ ಈ ಕೆಳಗಿನ ಯಾವುದಾದರು ಒಂದು ದಾಖಲೆ ಕಡ್ಡಾಯ .

  • ಜನನ ಪ್ರಮಾಣ ಪತ್ರ (Birth Certificate)
  • ವೋಟರ್ ಏಡಿ (Voter ID)
  • 10 ನೇ ತರಗತಿ ಅಂಕಪಟ್ಟಿ (Class 10th certificate)
  • ಪಾಸ್ ಪೋರ್ಟ್ (Passport) ಅಧವಾ ಡ್ರೈವಿಂಗ್ ಲೈಸೆನ್ಸ್ 

ಎಷ್ಟು ದಿನಗಳಲ್ಲಿ PAN Card ಸಿಗುತ್ತದೆ : ಡಿಜಿಟಲ್ e-KYC  ಮೂಲಕ ನಿಮಿಷದಲ್ಲಿ e-Pan ಪಡೆಯಬಹುದು ಭೌತಿಕ ಕಾರ್ಡ್ (Physical card) ಮನೆಗೆ ಬರಲು  15 ರಿಂದ 21 ದಿನಗಳು ಬೇಕಾಗುತದ್ದೆ .

ಪ್ಯಾನ್ ಕಾರ್ಡ್ ಅಪ್ಡೇಟ್ ಮತ್ತು ತಿದ್ದುಪಡಿ 

ಹೆಸರು, ವಿಳಾಸ ಬದಲಾವಣೆ (PAN card update process): ನಿಮ್ಮ PAN ಕಾರ್ಡ್ ನಲ್ಲಿ ಹೆಸರು, ವಿಳಾಸ ಅಧವಾ ಜನ್ಮ ದಿನಾಂಕ ತಪ್ಪಾಗಿದ್ದರೆ, ಅದನ್ನು ತಕ್ಷಣ ಆಧಾರ್ ಗೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಿ. ತಪ್ಪು ಮಾಹಿತಿಯಿಂದ ಪ್ಯಾನ್ ಆಧಾರ್ ಲಿಂಕ್ ರಿಜೆಕ್ಟ್ ಆಗಬಹುದು .

e-Pan ಡೌನ್ ಲೋಡ್ ವಿಧಾನ : ನಿಮ್ಮ ಕಾರ್ಡ್ ಕಳೆದುಹೋಗಿದ್ದರೆ ಅಧವಾ QR ಕೊಡ ಇರುವ ಹೊಸ ಪ್ಯಾನ್ ಕಾರ್ಡ್ ಬೇಕಿದ್ದರೆ, ಪೋರ್ಟಲ್ ನಲ್ಲಿ ಉಚಿತವಾಗಿ (Free QR card upgrade) ರಿಪ್ರಿಂಟ್ (Reprint) ಮಾಡಿಕೊಳ್ಳಬಹುದು ಮತ್ತು  e-PAN ಡೌನ್ ಲೋಡ್ ಮಾಡಿಕೊಳ್ಳಬಹುದು.

ಹೊಸ ನಿಯಮಗಳ ಪ್ರಕಾರ ದಂಡ ಮತ್ತು ಶಿಕ್ಷೆಗಳು 

IT department ನಿಯಮಗಳು ಮತ್ತು ದಂಡ (PAN penalty India)

  • ಹೆಚ್ಚಿನ TDS/TCS ಕಡಿತ : ಉದಾಹರಣೆಗೆ: ನಿಮ್ಮ PAN Card ನಿಷ್ಕ್ರಿಯವಾಗಿದೆ, ನಿಮ್ಮ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ (FD)  ಮೇಲಿನ ಬಡ್ಡಿ ಅಧವಾ ಸಂಬಳದ ಮೇಲಿನ ಸಾಮಾನ್ಯ 10% ಬದಲಾಗಿ 20% ಕಡ್ಡಾಯ TDS ಕಡಿತ ಮಾಡಲಾಗುತ್ತದೆ.
  • ತಪ್ಪು ಮಾಹಿತಿ / PAN Card ಇಲ್ಲದಿದ್ದರೆ : ವ್ಯಾಪಾರಸ್ಥರು PAN ನೀಡದಿದ್ದರೆ 10,000 ಕಿಂತ ಹೆಚ್ಚಿನ ನಗದು ಪಾವತಿಯ ಶೇ. 30% ರಷ್ಟು ಮೊತ್ತವನ್ನು ಬಿಸಿನೆಸ್ ಖರ್ಚು ಎಂದು ಪರಿಗಣಿಸಲಾಗುವುದಿಲ್ಲ (Disallowance of business expenses).

PAN Card ಕಡ್ಡಾಯವಾಗಿರುವ ಸಂದರ್ಭಗಳು 

ಬ್ಯಾಂಕ್ ಹಾಗು ಆರ್ಧಿಕ ವಹಿವಾಟುಗಳಿಗೆ (Financial transactions PAN) ಈ ಕೆಳಗಿನ ಹೊಸ ಮಿತಿಗಳನ್ನು (Limits) ನಿಗದಿಪಡಿಸಲಾಗಿದೆ.

  • ಬ್ಯಾಂಕ್ ಖಾತೆ ಮತ್ತು ನಗದು ವಹಿವಾಟು: ಒಂದು ಆರ್ಧಿಕ ವರ್ಷದಲ್ಲಿ ಎಲ್ಲ ಬ್ಯಾಂಕ್ ಖಾತೆಗಲ್ಲಿ ಸೇರಿ ನಗದು ಜಮಾ ಅಧವಾ ಹಿಂಪೆಡೆಯುವಿಕೆ (Cash deposit/withdrawal) 10 ಲಕ್ಷ ಮಿಡಿದರೆ PAN ಕಡ್ಡಾಯ 
  • ವಾಹನ ಖರೀದಿ : ಯಾವುದೇ ದ್ವಿಚಕ್ರ ವಾಹನ (Two-wheelers) ಸೇರಿದಂತೆ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಾಹನ ಖರೀದಿಗೆ PAN ಬೇಕೇ ಬೇಕು 
  • ಹೋಟೆಲ್/ಪ್ರವಾಸ (Hotel & Travel) ಹೋಟೆಲ್ ಅಥವಾ ಈವೆಂಟ್ ಗಳ ಬಿಲ್ 1 ಲಕ್ಷ ಮೀರಿದರೆ PAN ಒದಗಿಸುವುದು ಕಡ್ಡಾಯ 

PAN Card ಸಾಮಾನ್ಯ ಪ್ರೆಶ್ನೆ ಗಳು (FAQs)

Q 1. PAN Card ಇಲ್ಲದಿದ್ದರೆ ವಹಿವಾಟು ಮಾಡಲು ಏನು ಮಾಡಬೇಕು ?

Ans. PAN Card ಇಲ್ಲದವರು ನಿರ್ಧಿಷ್ಟ ವಹಿವಾಟುಗಳನ್ನು ಮಾಡಲು ಹಳೆಯ Form 60 ಬದಲಾಗಿ ಈಗ ಹೊಸ Form 97 ಅನ್ನು ಸಲ್ಲಿಸಬೇಕಾಗುತ್ತದೆ 

Q  2. ಒಬ್ಬರೇ ಒಂದಕ್ಕಿಂತ ಹೆಚ್ಚು PAN Card ಹೊಂದಿದರೆ ಏನು ಮಾಡಬೇಕು ?

Ans. ಒಂದಕ್ಕಿಂತ ಹೆಚ್ಚು PAN Card ಕಾನೂನು ಬಾಹಿರವಾಗಿದೆ. ಕೊಡಲೇ ಆದಾಯ ತೆರೆಗೆ ಇಲಾಖೆ ಗೆ ಸಂಪರ್ಕಿಸಿ ಹೆಚ್ಚಿನ್ ಪ್ಯಾನ್ ಕಾರ್ಡ್ ಅನ್ನು ಒಪ್ಪಿಸಬೇಕು ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ 

Q 3. PAN Card inactive ಆಗಿದ್ರೆ ಮತ್ತೆ activate ಮಾಡುವುದು ಹೇಗೆ ?

Ans. ಆದಾಯ ತೆರಿಗೆ ಇಲಾಖೆಯ e-Pay Tex  ಪೋರ್ಟಲ್ ನಲ್ಲಿ 1000  ದಂಡ ಪಾವತಿಸಿ , ‘Link Aadhaar ‘ ಆಯ್ಕೆ ಮೂಲಕ ಲಿಂಕ್ ಮಾಡಬೇಕು. ಇದು ಆಕ್ಟಿವ್ ಆಗಲು 7 ರಿಂದ 30 ದಿನಗಳ ಸಮಯ ಹಿಡಿಯಬಹುದು 

ಉಪಸಂಹಾರ (Conclusion)

1 ಏಪ್ರಿಲ್ 2026 ರಿಂದ ಜಾರಿಗೆ ಬರುವ  ಹೊಸ ಆದಾಯ ತೆರಿಗೆ ಕಾಯ್ದೆ ಮತ್ತು PAN Card rules summary ಗಮನಿಸಿದರೆ ಸರ್ಕಾರವು ಹಣಕಾಸಿನ ವಹಿವಾಟುಗಳನ್ನು ಸಂಪೂರ್ಣ ಡಿಜಿಟಲ್ ಮತ್ತು ಪಾರದರ್ಶಕಗೊಳುಸುತಿದೆ ಎಂಬುದು ಸ್ಪಷ್ಟ. ಭಾರಿ ದಂಡಗಳು ಹಾಗು ಶೇ 20% TDS ಕಡಿತದಿಂದ ಪಾರಾಗಲು ನಿಮ್ಮ PAN Card – Aadhaar ಗೆ ಲಿಂಕ್ ಅನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ. ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಏಪ್ರಿಲ್ 1 ಕು ಮುನ್ನವೇ ಆಧಾರ್ ಬಳಸಿ ಸುಲಭವಾಗಿ ಅರ್ಜಿ ಸಲ್ಲಿಸುವುದು ಜಾಣತನ ತಕ್ಷಣವೇ ನಿಮ್ಮ ಪ್ಯಾನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿ ಮತ್ತು ಸುರಕ್ಷಿತರಾಗಿ .

Bharath k

Bharath K is the founder of LiveKannadaNews.com, with 4+ years of experience in digital publishing, specializing in government jobs, public schemes, technology, and automobile updates.

Join WhatsApp

Join Now

Join Telegram

Join Now

Leave a Comment